ಹೋಮ್ | ಮೈಗವ್

ಪ್ರವೇಶಿಸುವಿಕೆ
ಪ್ರವೇಶಿಸುವಿಕೆ ಪರಿಕರಗಳು
ಬಣ್ಣ ಹೊಂದಾಣಿಕೆ
ಪಠ್ಯ ಗಾತ್ರ
ನ್ಯಾವಿಗೇಷನ್ ಹೊಂದಾಣಿಕೆ

ಮಾಧ್ಯಮದಲ್ಲಿ ಮೈಗವ್

ಸರ್ಕಾರವು ಗೂಗಲ್ ನೊಂದಿಗೆ ಇಂಟರ್ನೆಟ್ ಸುರಕ್ಷತಾ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ
  • ಸೈಬರ್ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಗೂಗಲ್ ಸಹಭಾಗಿತ್ವದಲ್ಲಿ ಮೈಗವ್ ಇಂಟರ್ನೆಟ್ ಸುರಕ್ಷತಾ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ
  • ಸೈಬರ್ ಭದ್ರತಾ ಶಿಕ್ಷಣ ಮತ್ತು ಜಾಗೃತಿ ಅಭಿಯಾನದಲ್ಲಿ ಗೂಗಲ್ ಮತ್ತು ಸರ್ಟ್-ಇನ್ ಜೊತೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ನಮಗೆ ಸಂತೋಷವಾಗಿದೆ. ಎಂದು ಮೈಗವ್ CEO ಗೌರವ್ ದ್ವಿವೇದಿ ಹೇಳಿದ್ದಾರೆ
  • ಮೈಗವ್ ತನ್ನ ಎಲ್ಲಾ ಪಾಲುದಾರರ ಸಹಯೋಗದೊಂದಿಗೆ ವಿವಿಧ ಇಂಟರ್ನೆಟ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಹೊರಡಿಸುವ ನಿರೀಕ್ಷೆಯಿದೆ
ಭಾರತೀಯ ನಿಯೋಗಗಳ ಸೇವೆಗಳ ಕುರಿತು ಮತ್ತು ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ತೇಜಿಸಲು ಸಲಹೆಗಳನ್ನು ಆಹ್ವಾನಿಸಿದ ಪ್ರಧಾನಿ ಮೋದಿ
  • 'ಅಂತರರಾಷ್ಟ್ರೀಯ ಯೋಗ ದಿನ' ಮತ್ತು ಭಾರತೀಯ ರಾಯಭಾರ ಕಚೇರಿಗಳಲ್ಲಿನ ಸೇವೆಗಳ ಕುರಿತು ಮೈಗವ್ ವೇದಿಕೆಯ ಮೂಲಕ ಪ್ರಧಾನಿ ಮೋದಿ ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ
  • MyGov ಮುಕ್ತ ವೇದಿಕೆಯಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ:http://mygov.in/groupissue/celebration-of-international-day-of-yoga/show: ಪ್ರಧಾನಿ ಮೋದಿ
  • ಮೈಗವ್ ಮೂಲಕ ರಾಯಭಾರ ಕಚೇರಿಗೆ ಸಿಗಲಿರುವ ಸಲಹೆಗಳು ನಿಯೋಗದ ಮುಖ್ಯಸ್ಥರ ಸಮಾವೇಶಕ್ಕೆ ಅಮೂಲ್ಯ ವಿಚಾರಗಳನ್ನು ನೀಡಲಿದೆ : ಪ್ರಧಾನಿ ಮೋದಿ
ಸರ್ಕಾರದ ಕ್ರೌಡ್ ಸೋರ್ಸಿಂಗ್ ಪೋರ್ಟಲ್ ಮೈಗವ್ ಶೀಘ್ರದಲ್ಲೇ ಹೊಸ ಸ್ವರೂಪದಲ್ಲಿ ಅನಾವರಣಗೊಳ್ಳಲಿದೆ
  • ಸರ್ಕಾರದ ಐಡಿಯಾ ಕ್ರೌಡ್ಸೋರ್ಸಿಂಗ್ ಪ್ಲಾಟ್ಫಾರ್ಮ್ MyGov.in, 2015 ರ ಜನವರಿ ತಿಂಗಳಲ್ಲಿ ನವೀಕರಣಕ್ಕೆ ಸಿದ್ಧವಾಗಿದೆ
  • ದೇಶಾದ್ಯಂತದ ಮೈಗವ್ ಪ್ರಾದೇಶಿಕ ಮಟ್ಟದ ಮತ್ತು ವ್ಯಾಪಕವಾದ ಸಮಾಲೋಚನೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ.
  • ಮೈಗವ್ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ ಎಂದು ಮೈಗವ್ CEO ಗೌರವ್ ದ್ವಿವೇದಿ ಹೇಳಿದ್ದಾರೆ.
ಭಾರತವನ್ನು ಕ್ರೀಡಾ ಸೂಪರ್ ಪವರ್ ಮಾಡುವ ಬಗ್ಗೆ ಸರ್ಕಾರವು ಸಲಹೆಗಳನ್ನು ಆಹ್ವಾನಿಸಿದೆ
  • ಕ್ರೀಡಾ ಇಲಾಖೆಯು 'ಮೇಕಿಂಗ್ ಇಂಡಿಯಾ ಎ ಸ್ಪೋರ್ಟ್ಸ್ ಸೂಪರ್ ಪವರ್ (ಭಾರತವನ್ನು ಕ್ರೀಡಾ ಸೂಪರ್ ಪವರ್ ಮಾಡುವುದು)' ಎಂಬ ವಿಷಯದ ಬಗ್ಗೆ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಮೈಗವ್ನಲ್ಲಿ ಆಹ್ವಾನಿಸಿದೆ.
  • ಭಾರತವು ಕ್ರೀಡಾ ಕ್ಷೇತ್ರದಲ್ಲಿ ಸ್ಥಿರ ಪ್ರಗತಿಯ ಹಾದಿಯಲ್ಲಿದೆ, ಆದರೆ ಇನ್ನು ಹೆಚ್ಚು ಸಾಧಿಸುವ ಸಾಮರ್ಥ್ಯವನ್ನು ಅದು ಹೊಂದಿದೆ - ಕ್ರೀಡಾ ಇಲಾಖೆ.
  • ಕ್ರೀಡಾ ಸಂಸ್ಕೃತಿಯ ಅಭಿವೃದ್ಧಿಗೆ ಸರಿಯಾದ ಕ್ರಮಗಳನ್ನು ಕೈಗೊಂಡರೆ ಭಾರತವು ಕ್ರೀಡಾ ಸೂಪರ್ ಪವರ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮೈಗವ್ ಪೋರ್ಟಲ್ ಮತ್ತು ಅದರ ಬಗ್ಗೆ ಜನರ ಅಭಿಪ್ರಾಯ
  • ಮೈಗವ್ ಬಿಜೆಪಿ ನೇತೃತ್ವದ NDA ಸರ್ಕಾರದ ಒಂದು ಹೊಸ ಆಲೋಚನೆಯಾಗಿದೆ.
  • 'ಪ್ರಧಾನಿ ಮೋದಿ ಅವರ ಸುರಾಜ್ಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮೈಗವ್ ಒಂದು ಮೊದಲ ಹೆಜ್ಜೆಯಾಗಿದೆ.
  • ಜನರೊಂದಿಗೆ ಸಂಪರ್ಕದಲ್ಲಿರುವ ಸರ್ಕಾರದ ಉದ್ದೇಶದ ಬಗ್ಗೆ ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ವೆಬ್‌ಸೈಟ್‌ನ ಲೇಔಟ್ ತುಂಬಾ ಬಳಕೆದಾರ ಸ್ನೇಹಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ
ಸರ್ಕಾರದ ಬಗ್ಗೆ ದೂರುವುದನ್ನು ನಿಲ್ಲಿಸಿ, ಬದಲಿಗೆ, ಭಾರತವು ನಾಗರಿಕರ ಸಹಾಯದ ನಿರೀಕ್ಷೆಯಲ್ಲಿದೆ
  • ತನ್ನ 3-ಡಿ-ಹೋಲೋಗ್ರಾಂ ಚುನಾವಣಾ ಭಾಷಣಗಳು ಮತ್ತು ಸಾಮಾನ್ಯ ಟೆಕ್-ಜ್ಞಾನಕ್ಕೆ ಹೆಸರುವಾಸಿಯಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆಯೇ ಮೈಗವ್
  • ಮೈಗವ್ ಪ್ರಸ್ತುತ ಅನೇಕ ಯೋಜನೆಗಳನ್ನು ಒಳಗೊಂಡಿದೆ: ಸ್ವಚ್ಛ ಗಂಗಾ, ಡಿಜಿಟಲ್ ಇಂಡಿಯಾ, ಹೆಣ್ಣು ಮಕ್ಕಳ ಶಿಕ್ಷಣ, ಹಸಿರು ಭಾರತ, ಉದ್ಯೋಗ ಸೃಷ್ಟಿ ಇತ್ಯಾದಿ.
  • ಮೈಗವ್ ಪೋರ್ಟಲ್ ಸಹಜವಾಗಿಯೇ ಅನೇಕ ಭಾರತೀಯರ ಮನಗೆದ್ದಿದೆ. ಜುಲೈನಲ್ಲಿ ಅಂದಾಜಿನ ಟ್ರ್ಯಾಫಿಕ್ 1.4 ದಶಲಕ್ಷ ಭೇಟಿಗಳನ್ನು ಇದು ಹೊಂದಿದೆ.
ಎಲ್ಲಾ ಹಳ್ಳಿಗಳನ್ನು ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕಿಸಲು 750,000 ಕಿಮೀ ಕೇಬಲ್: ಪ್ರಸಾದ್
  • 750,000km ಕೇಬಲ್ ಅಳವಡಿಕೆಯ ಪ್ರಸ್ತಾವನೆ ಇದೆ, ಈ ಮೂಲಕ ಜನರನ್ನು ಡಿಜಿಟಲ್ ಸಶಕ್ತರನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಮೊದಲ ಮೈಗವ್ ಸಂವಾದದಲ್ಲಿ IT ಸಚಿವರು ಹೇಳಿದರು
  • ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ಆರಂಭಿಸಿದ ಮೈಗವ್, ಒಂದು ಇಂಟರ್ನೆಟ್ ಆಧಾರಿತ ನಾಗರಿಕ ಭಾಗವಹಿಸುವಿಕೆಯ ವೇದಿಕೆಯಾಗಿದೆ.
  • 40 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳ ಪೈಕಿ 20 ಅತ್ಯುತ್ತಮ ಪ್ರತಿಕ್ರಿಯೆ ನೀಡಿದವರನ್ನು ಅವರ ಅಭಿಪ್ರಾಯಗಳು ಮತ್ತು ಸಲಹೆಗಳಿಗಾಗಿ ಸಚಿವರು ಸನ್ಮಾನಿಸಿದರು.
ಶ್ರೀ ನರೇಂದ್ರ ಮೋದಿ ಸರ್ಕಾರ ಪ್ರತಿ ಹಳ್ಳಿಗೂ ಬ್ರಾಡ್ ಬ್ಯಾಂಡ್ ಒದಗಿಸಲಿದೆ
  • ಮುಂದಿನ ಮೂರೂವರೆ ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿ ಸರ್ಕಾರವು ಪ್ರತಿ ಹಳ್ಳಿಗೂ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ವಿಸ್ತರಿಸುವ ಭರವಸೆ ನೀಡಿದೆ.
  • ಮಾಹಿತಿ ತಂತ್ರಜ್ಞಾನವನ್ನು ದೇಶದ ಪ್ರತಿ ಹಳ್ಳಿಗೂ ವಿಸ್ತರಿಸಲು ನಮ್ಮ ಸರ್ಕಾರ ಬದ್ಧವಾಗಿದೆ: ಮೈಗವ್ ಸಂವಾದದಲ್ಲಿ IT ಸಚಿವರು ಹೇಳಿದ್ದಾರೆ
  • ಮೈಗವ್ ಸಂವಾದ್, ಆಡಳಿತಕ್ಕಾಗಿ ಕೊಡುಗೆ ನೀಡುವ ನಾಗರಿಕರನ್ನು ಗೌರವಿಸುತ್ತದೆ.