ಹೋಮ್ | ಮೈಗವ್

ಪ್ರವೇಶಿಸುವಿಕೆ
ಪ್ರವೇಶಿಸುವಿಕೆ ಪರಿಕರಗಳು
ಬಣ್ಣ ಹೊಂದಾಣಿಕೆ
ಪಠ್ಯ ಗಾತ್ರ
ನ್ಯಾವಿಗೇಷನ್ ಹೊಂದಾಣಿಕೆ

ನಿಯಮಗಳು ಮತ್ತು ನಿಬಂಧನೆಗಳು

ಈ ಬಳಕೆಯ ನಿಯಮಗಳು, ಮೈಗವ್ .in ( ಮೈಗವ್ ) ಬಳಕೆದಾರರಾಗಿ ನಿಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುತ್ತದೆ. ಮೈಗವ್ ಖಾತೆಯನ್ನು ಹೊಂದಲು, ನೀವು ಈ ಬಳಕೆಯ ನಿಯಮಗಳನ್ನು ಒಪ್ಪಿಕೊಳ್ಳಬೇಕು.

ಮೈಗವ್ , NIC, MeitY ಮತ್ತು ಭಾರತ ಸರ್ಕಾರವು ಈ ಬಳಕೆಯ ನಿಯಮಗಳಲ್ಲಿ ಯಾವುದೇ ಸಮಯದಲ್ಲಿ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಕಾಯ್ದಿರಿಸಿದೆ. ಆ ಬದಲಾವಣೆಗಳು ನಿಮ್ಮ ಹಕ್ಕುಗಳು ಅಥವಾ ಜವಾಬ್ದಾರಿಗಳ ಮೇಲೆ ಪರಿಣಾಮ ಬೀರಿದರೆ, ನಿಮಗೆ ಅದರ ಸೂಚನೆಯನ್ನು ಮೈಗವ್ ಮೂಲಕ ನೀಡಲಾಗುತ್ತದೆ.

ನಿಮ್ಮ ಮೈಗವ್ ಬಳಕೆಯನ್ನು ನಿಯಂತ್ರಿಸಲು ನೀವು ಈ ಹಿಂದೆ ಒಪ್ಪಿಕೊಂಡಿರಬಹುದಾದ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಈ ಕೆಳಗಿನ ಬಳಕೆಯ ನಿಯಮಗಳು ರದ್ದುಗೊಳಿಸುತ್ತವೆ ಮತ್ತು ಬದಲಾಯಿಸುತ್ತವೆ. ಕೆಳಗಿನ ನಿಯಮಗಳು ಮತ್ತು ನಿಬಂಧನೆಗಳು ನೀವು ಅದನ್ನು ಒಪ್ಪಿಕೊಂಡ ತಕ್ಷಣ ಮತ್ತು ನಿಮ್ಮ ಮೈಗವ್ ಖಾತೆಯನ್ನು ರಚಿಸಿದ ತಕ್ಷಣ ಜಾರಿಗೆ ಬರುತ್ತವೆ.

ಮೈಗವ್ ಬಳಕೆದಾರನಾಗಿ, ಈ ಬಳಕೆಯ ನಿಯಮಗಳಿಗೆ ಅನುಗುಣವಾಗಿ ಮೈಗವ್ ಮತ್ತು ಅದರಲ್ಲಿನ ವಿಷಯವನ್ನು ಪ್ರವೇಶಿಸಲು ಮತ್ತು ಬಳಸಲು ನಿಮಗೆ ವಿಶೇಷವಲ್ಲದ, ವರ್ಗಾಯಿಸಲಾಗದ, ಬದಲಾಯಿಸಲಾಗದ ಸೀಮಿತ ಪರವಾನಗಿಯನ್ನು ನೀಡಲಾಗುತ್ತದೆ. ಪೂರೈಕೆದಾದರು ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ಈ ಪರವಾನಗಿಯನ್ನು ಅಂತ್ಯಗೊಳಿಸಬಹುದು.

ಮೈಗವ್ ವಿನ್ಯಾಸ ಮತ್ತು ನಿರ್ವಹಣೆ ರಾಷ್ಟ್ರೀಯ ಮಾಹಿತಿ ಕೇಂದ್ರ, ಭಾರತ ಸರ್ಕಾರದ ವಿವಿಧ ಸಂಸ್ಥೆಗಳು, ಇಲಾಖೆಗಳು ಮತ್ತು ಸಚಿವಾಲಯಗಳು ಒದಗಿಸಿರುವ ವಿಷಯಗಳು.

ಮೈಗವ್ನಲ್ಲಿನ ವಿಷಯದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆಯಾದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಸಂಬಂಧಿತ ಸಚಿವಾಲಯ / ಇಲಾಖೆ / ಸಂಸ್ಥೆ ಮತ್ತು / ಅಥವಾ ಇತರ ಮೂಲ (ಗಳು) ದೊಂದಿಗೆ ಪರಿಶೀಲಿಸಲು / ತಪಾಸಣೆ ನಡೆಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ.

ಮೈಗವ್ ಬಳಕೆಯಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ಉಂಟಾಗುವ ಡೇಟಾದ ಬಳಕೆಯಿಂದ ಅಥವಾ ಬಳಕೆಯ ನಷ್ಟದಿಂದ ಉಂಟಾಗುವ ಯಾವುದೇ ಮಿತಿಯಿಲ್ಲದ, ಪರೋಕ್ಷ ಅಥವಾ ಪರಿಣಾಮವಾಗಿ ಉಂಟಾಗಬಹುದಾದ ನಷ್ಟ ಅಥವಾ ಹಾನಿ, ಅಥವಾ ಯಾವುದೇ ವೆಚ್ಚ ಸೇರಿದಂತೆ, ಯಾವುದೇ ನಷ್ಟ ಅಥವಾ ಹಾನಿಗಾಗಿ ಯಾವುದೇ ಕಾರಣಕ್ಕೂ ಸರ್ಕಾರದ ಸಚಿವಾಲಯ/ಇಲಾಖೆ/ಸಂಸ್ಥೆ ಹೊಣೆಯಾಗುವುದಿಲ್ಲ.

ಬಳಕೆಯ ಮಿತಿ:

ಮೈಗವ್ ನಲ್ಲಿನ ವಿಷಯವು ನಿಮ್ಮ ವೈಯಕ್ತಿಕ ಬಳಕೆಗಾಗಿ ಮಾತ್ರ ಸೀಮಿತವಾಗಿರುತ್ತದೆ ಮತ್ತು ಅದರ ವಾಣಿಜ್ಯ ಬಳಕೆ ಮಾಡುವಂತಿಲ್ಲ. ನೀವು ಮೈಗವ್ ನಲ್ಲಿನ ಸ್ವತ್ತುಗಳನ್ನು ಡಿಕಂಪೈಲ್, ರಿವರ್ಸ್ ಎಂಜಿನಿಯರ್, ಡಿಸ್ಅಸೆಂಬಲ್, ಬಾಡಿಗೆ, ಗುತ್ತಿಗೆ, ಸಾಲ, ಮಾರಾಟ, ಸಬ್ಲೈಸೆನ್ಸ್, ಅಥವಾ ಡಿರೈವೆಟಿವ್ ಗಾಗಿ ಬಳಸುವಂತಿಲ್ಲ. ಹಾಗೆ, ಸೈಟ್ ಆರ್ಕಿಟೆಕ್ಚರ್ ಅನ್ನು ನಿರ್ಧರಿಸಲು ಅಥವಾ ಬಳಕೆ, ವೈಯಕ್ತಿಕ ಗುರುತುಗಳು ಅಥವಾ ಬಳಕೆದಾರರ ಬಗ್ಗೆ ಮಾಹಿತಿಯನ್ನು ಹೊರತೆಗೆಯಲು ನೀವು ಯಾವುದೇ ನೆಟ್‌ವರ್ಕ್ ಮಾನಿಟರಿಂಗ್ ಅಥವಾ ಡಿಸ್ಕವರಿ ಸಾಫ್ಟ್‌ವೇರ್ ಅನ್ನು ಬಳಸಬಾರದು. ಪೂರೈಕೆದಾರರ ಪೂರ್ವ ಲಿಖಿತ ಅನುಮತಿಯಿಲ್ಲದೆ ಮೇಲ್ವಿಚಾರಣೆ ಮಾಡಲು ಅಥವಾ ನಕಲಿಸಲು ನೀವು ಯಾವುದೇ ರೋಬೋಟ್, ಸ್ಪೈಡರ್, ಇತರ ಸ್ವಯಂಚಾಲಿತ ಸಾಫ್ಟ್ವೇರ್ ಅಥವಾ ಸಾಧನ, ಅಥವಾ ಮ್ಯಾನ್ಯುಯಲ್ ಪ್ರಕ್ರಿಯೆಯನ್ನು ಬಳಸುವಂತಿಲ್ಲ. ಈ ಬಳಕೆಯ ನಿಯಮಗಳ ಹಕ್ಕುಸ್ವಾಮ್ಯ ನೀತಿಯಿಂದ ಅನುಮತಿಸಲಾದ ವ್ಯಾಪ್ತಿಯನ್ನು ಹೊರತುಪಡಿಸಿ, ವಾಣಿಜ್ಯ, ಲಾಭೋದ್ದೇಶವಿಲ್ಲದ ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಎಲ್ಲಾ ಅಥವಾ ಯಾವುದೇ ಭಾಗವನ್ನು ನೀವು ನಕಲಿಸಲು, ಮಾರ್ಪಡಿಸಲು, ಮರುಪ್ರಕಟಿಸಲು, ವಿತರಿಸಲು, ಪ್ರದರ್ಶಿಸಲು ಅಥವಾ ಪ್ರಸಾರ ಮಾಡಲು ಬಳಸುವಂತಿಲ್ಲ. ಮೈಗವ್ ನ ಯಾವುದೇ ರೀತಿಯ ಅನಧಿಕೃತ ಬಳಕೆಯನ್ನು ನಿಷೇಧಿಸಲಾಗಿದೆ. ಮೈಗವ್ ನಿಂದ ಬರವಣಿಗೆಯಲ್ಲಿ ಸ್ಪಷ್ಟವಾಗಿ ಅಧಿಕೃತವಾಗದ ಹೊರತು ವೆಬ್ಸೈಟ್ ಪುಟಗಳನ್ನು ಪ್ರವೇಶಿಸಲು, ಮೇಲ್ವಿಚಾರಣೆ ಮಾಡಲು ಅಥವಾ ನಕಲಿಸಲು ಯಾವುದೇ ಸಾಫ್ಟ್ವೇರ್ (ಉದಾಹರಣೆಗೆ ಬಾಟ್ಗಳು, ಸ್ಕ್ರಾಪರ್ ಉಪಕರಣಗಳು) ಅಥವಾ ಇತರ ಸ್ವಯಂಚಾಲಿತ ಸಾಧನಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ ನೀತಿ:

ವಿಷಯವನ್ನು ಅಪ್‌ಲೋಡ್ ಮಾಡುವ ಮೂಲಕ ಅಥವಾ ಮೈಗವ್ ನಲ್ಲಿ ಬಳಕೆಗಾಗಿ ಯಾವುದೇ ವಸ್ತುಗಳನ್ನು ಸಲ್ಲಿಸುವ ಮೂಲಕ, ನೀವು ಉಪಪರವಾನಗಿಯ ಹಕ್ಕಿನೊಂದಿಗೆ ಶಾಶ್ವತವಾದ, ವಿಶ್ವಾದ್ಯಂತ, ರಾಯಧನ-ಮುಕ್ತ, ಹಿಂತೆಗೆದುಕೊಳ್ಳಲಾಗದ, ವಿಶೇಷವಲ್ಲದ, ಜೊತೆಯಲ್ಲಿ ಉಪಪರವಾನಗಿಯ, ಬಳಕೆಯ, ಪುನರುತ್ಪಾದನೆಯ, ಮಾರ್ಪಡಿಸುವ, ಹೊಂದಿಕೊಳ್ಳುವ, ಪ್ರಕಟಿಸುವ, ಸಾರ್ವಜನಿಕವಾಗಿ ಪ್ರದರ್ಶಿಸುವ, ಡಿಜಿಟಲ್ ಮೂಲಕ ಪ್ರದರ್ಶಿಸುವ, ಭಾಷಾಂತರಿಸುವ, ವ್ಯುತ್ಪನ್ನ ವಿಷಯ ರಚಿಸುವ ಅಥವಾ ಅಂತಹ ವಿಷಯಗಳನ್ನು ವಿತರಿಸುವ ಅಥವಾ ಅವುಗಳನ್ನು ಈಗ ತಿಳಿದಿರುವ ಅಥವಾ ನಂತರದಲ್ಲಿ ವಿಶ್ವಾದ್ಯಂತ ಅಭಿವೃದ್ಧಿಯಾಗಬಹುದಾದ ಯಾವುದೇ ರೂಪ, ಮಾಧ್ಯಮ ಅಥವಾ ತಂತ್ರಜ್ಞಾನಕ್ಕೆ ಸಂಯೋಜಿಸುವ ಹಕ್ಕು ಮತ್ತು ಪರವಾನಗಿಯನ್ನು ನೀಡುತ್ತೀರಿ (ಅಥವಾ ಅಂತಹ ಹಕ್ಕುಗಳ ಮಾಲೀಕರು ಸ್ಪಷ್ಟವಾಗಿ ಮಂಜೂರು ಮಾಡಿದ್ದಾರೆ ಎಂದು ಧೃಡೀಕರಿಸಿರುತ್ತೀರಿ) .

ಬಳಕೆದಾರರ ಜವಾಬ್ದಾರಿ:

ನೀವು:

  • ಮೈಗವ್ ಅಥವಾ ಮೆಂಬರ್ ಸರ್ವಿಸ್ ಅನ್ನು ಪ್ರವೇಶಿಸುವ ಅಥವಾ ಬಳಸುವ ಓರ್ವ ಸಹಜ ವ್ಯಕ್ತಿಯಾಗಿರುತ್ತೀರಿ
  • (ನೇರವಾಗಿ ಅಥವಾ ಪರೋಕ್ಷವಾಗಿ) ಯಾವುದೇ ಇತರ ವ್ಯಕ್ತಿಯ ಮೈಗವ್ ಅಥವಾ ಸದಸ್ಯ ಸೇವಾ ಖಾತೆಗೆ ಪ್ರವೇಶಿಸಲು ಅಥವಾ ಲಿಂಕ್ ಮಾಡಲು ಪ್ರಯತ್ನಿಸಬೇಡಿ
  • ನಿಮ್ಮ ಯೂಸರ್‌ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಲು ಬೇರೆ ಯಾವುದೇ ವ್ಯಕ್ತಿಯನ್ನು ಅನುಮತಿಸಬೇಡಿ ಮತ್ತು ನಿಮ್ಮ ಮೈಗವ್ ಖಾತೆಯ ಯೂಸರ್‌ನೇಮ್, ಪಾಸ್ವರ್ಡ್ ಅನ್ನು ಯಾವಾಗಲೂ ನಿಮ್ಮೊಂದಿಗೆ ಸುರಕ್ಷಿತವಾಗಿರಿಸಿ ಮತ್ತು ನಿಮ್ಮ ಪಾಸ್ವರ್ಡ್ ಅನ್ನು ಬೇರೆಯವರಿಗೆ ಬಹಿರಂಗಪಡಿಸಬೇಡಿ
  • ನಿಮ್ಮ ಮೈಗವ್ ಖಾತೆಯ ಭದ್ರತೆಗೆ ಧಕ್ಕೆಬಂದದೆಯೆಂದು ನಿಮಗೆ ಅನುಮಾನ ಬಂದರೆ ಕೂಡಲೇ ಹೆಲ್ಪ್ ಡೆಸ್ಕ್ ಗೆ ವರದಿ ಮಾಡಿ. ಉದಾ. ನಿಮ್ಮ ಪಾಸ್ವರ್ಡ್ ಅಥವಾ ಬಳಕೆದಾರಹೆಸರು ಕಳೆದುಹೋಗಿದೆ ಅಥವಾ ಕದಿಯಲಾಗಿದೆ ಎಂದಾದರೆ. ನಮ್ಮನ್ನು ಸಂಪರ್ಕಿಸಿ ಯಲ್ಲಿ ನೀಡಲಾಗಿರುವ ವಿವರಗಳನ್ನು ಬಳಸಿಕೊಂಡು ಮೈಗವ್ ಅನ್ನು ಸಂಪರ್ಕಿಸಿ
  • ನಿಮ್ಮ ವೈಯಕ್ತಿಕ ವಿವರಗಳು (ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕ ಸೇರಿದಂತೆ) ನಿಖರವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಯಾವುದೇ ಬದಲಾವಣೆಯನ್ನು ಮೈಗವ್ಗೆ ಸೂಚಿಸಿ
  • ಬಳಕೆಯನ್ನು ನೀವು ಅಧಿಕೃತಗೊಳಿಸಿದ್ದರೂ ಅಥವಾ ಇಲ್ಲದಿದ್ದರೂ ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಮೂಲಕ ಆಗುವ ನಿಮ್ಮ ಮೈಗವ್ ಖಾತೆಯ ಬಳಕೆಗೆ ನೀವೇ ಜವಾಬ್ದಾರರಾಗಿರುತ್ತೀರಿ.
  • ಮೈಗವ್ ನಲ್ಲಿನ ವಿವರಗಳನ್ನು ಕೇವಲ ಮೈಗವ್ ವೆಬ್ಸೈಟ್ ಮೂಲಕ ಮಾತ್ರ ಪಡೆಯಬಹುದು, ಮತ್ತು ನಿಮಗೆ ನಿರ್ದಿಷ್ಟವಾಗಿ ಹಂಚಿಕೆ ಮಾಡಲಾದ ಬಳಕೆದಾರ ಹೆಸರು ಮತ್ತು ದೃಢೀಕರಣ ವಿವರಗಳನ್ನು ಮಾತ್ರ ಬಳಸಬಹುದು.

ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಯಾವುದೇ ಮೂರನೇ ವ್ಯಕ್ತಿಯಿಂದ ಮೈಗವ್ ಬಳಕೆ ಮತ್ತು ಆನಂದವನ್ನು ನಿರ್ಬಂಧಿಸದ ರೀತಿಯಲ್ಲಿ ಮಾತ್ರ ನೀವು ಮೈಗವ್ ಮತ್ತು ನಿಮ್ಮ ಮೈಗವ್ ಖಾತೆಯನ್ನು ಬಳಸಬೇಕು. ಇದು ಕಾನೂನುಬಾಹಿರ ಅಥವಾ ಯಾವುದೇ ವ್ಯಕ್ತಿಗೆ ಕಿರುಕುಳ ಅಥವಾ ತೊಂದರೆ ಅಥವಾ ಅನಾನುಕೂಲತೆಯನ್ನು ಉಂಟುಮಾಡುವ, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯದ ರವಾನೆ ಅಥವಾ ಮೈಗವ್ ಗೆ ಅಗೌರವ ತರುವಂತಹ ನಡವಳಿಕೆಗಳನ್ನು ಒಳಗೊಂಡಿರುತ್ತದೆ.

ಯಾವುದೇ ಕಾನೂನುಬಾಹಿರ, ಮಾನಹಾನಿಕರ, ಅಶ್ಲೀಲ, ಆಕ್ರಮಣಕಾರಿ ಅಥವಾ ದುರುದ್ದೇಶದ ವಿಷಯಗಳನ್ನು ಅಥವಾ ಯಾವುದೇ ಕಾನೂನಿಗೆ ವಿರುದ್ಧವಾದ ನಡವಳಿಕೆಯನ್ನು ರೂಪಿಸುವ ಅಥವಾ ಪ್ರೋತ್ಸಾಹಿಸುವ ಯಾವುದೇ ವಿಷಯಗಳನ್ನು ನೀವು ಮೈಗವ್ ಮೂಲಕ ಪೋಸ್ಟ್ ಮಾಡಬಾರದು ಅಥವಾ ರವಾನಿಸಬಾರದು.

ಮೈಗವ್ನಲ್ಲಿ ನೀವು ಒದಗಿಸುವ ಮಾಹಿತಿ:

ಒಂದು ವೇಳೆ ನಿಮ್ಮ ಮೈಗವ್ ಖಾತೆಯೊಳಗೆ, ಮಾಹಿತಿಯನ್ನು ಒದಗಿಸಲು ನಿಮ್ಮನ್ನು ಕೇಳಿದರೆ, ನೀವು ಪೂರೈಸುವ ಮಾಹಿತಿ ಸಂಪೂರ್ಣ ಮತ್ತು ನಿಖರವಾಗಿರಬೇಕು. ನೀವು ಅಪೂರ್ಣ, ಅಸಮರ್ಪಕ ಅಥವಾ ಸುಳ್ಳು ಮಾಹಿತಿಯನ್ನು ಪೂರೈಸಿದರೆ ಅಥವಾ ಅನಧಿಕೃತ ಕ್ರಿಯೆಯನ್ನು ನಿರ್ವಹಿಸಲು (ಅಥವಾ ಪ್ರಯತ್ನಿಸಲು) ಅಥವಾ ಮೈಗವ್ ಅನ್ನು ದುರ್ಬಳಕೆ ಮಾಡಿದರೆ, ಅದು ನಿಮ್ಮ ಮೈಗವ್ ಪ್ರವೇಶವನ್ನು ಅಮಾನತುಗೊಳಿಸಬಹುದು ಅಥವಾ ಕೊನೆಗೊಳಿಸಬಹುದು.

ಸುಳ್ಳು ಅಥವಾ ತಪ್ಪು ಮಾಹಿತಿ ನೀಡುವುದು ಗಂಭೀರ ಅಪರಾಧ. ಮೈಗವ್ ಮೂಲಕ ಅಪೂರ್ಣ, ಅಸಮರ್ಪಕ ಅಥವಾ ಸುಳ್ಳು ಮಾಹಿತಿಯನ್ನು ಒದಗಿಸುವುದನ್ನು ಒಂದು ನಮೂನೆಯಲ್ಲಿ ಅಥವಾ ವೈಯಕ್ತಿಕವಾಗಿ ತಪ್ಪಾದ ಮಾಹಿತಿಯನ್ನು ಒದಗಿಸುವ ರೀತಿಯಲ್ಲಿಯೇ ಪರಿಗಣಿಸಲಾಗುತ್ತದೆ ಮತ್ತು ಇದು ಕಾನೂನು ಕ್ರಮ ಮತ್ತು ಸಿವಿಲ್ ಅಥವಾ ಕ್ರಿಮಿನಲ್ ದಂಡಕ್ಕೆ ಕಾರಣವಾಗಬಹುದು.

ಹಕ್ಕುಸ್ವಾಮ್ಯ ನೀತಿ:

ಈ ವೆಬ್ಸೈಟ್ ನಲ್ಲಿ ಪ್ರಕಟಗೊಳಿಸಿದ ಮಾಹಿತಿಯನ್ನು ಉಚಿತವಾಗಿ ಪುನರುತ್ಪಾದಿಸಬಹುದು. ಆದಾಗ್ಯೂ, ವಸ್ತು ನಿಖರವಾದ ಪುನರುತ್ಪಾದನೆಯನ್ನು ಮಾಡಬೇಕಾಗುತ್ತದೆ ಮತ್ತು ಅವಹೇಳನಕಾರಿ ರೀತಿಯಲ್ಲಿ ಅಥವಾ ತಪ್ಪುದಾರಿಗೆಳೆಯುವ ಸನ್ನಿವೇಶದಲ್ಲಿ ಅದನ್ನು ಬಳಸಬಾರದು. ಎಲ್ಲೆಲ್ಲಿ ಈ ಮಾಹಿತಿ ಪ್ರಕಟವಾಗುತ್ತದೋ ಅಥವಾ ಇದನ್ನು ಇತರರಿಗೆ ನೀಡಲಾಗುತ್ತದೋ ಅಲ್ಲಿ ಮೂಲದ ಸ್ವೀಕೃತಿಯನ್ನು ಸೂಚಿಸಬೇಕಾಗುತ್ತದೆ. ಆದಾಗ್ಯೂ, ಈ ಮಾಹಿತಿಯನ್ನು ಪುನರುತ್ಪಾದಿಸಲು ಅನುಮತಿಯು ಮೂರನೇ ವ್ಯಕ್ತಿಯ ಹಕ್ಕುಸ್ವಾಮ್ಯವೆಂದು ಗುರುತಿಸಲ್ಪಟ್ಟ ಯಾವುದೇ ಮಾಹಿತಿಗಳಿಗೆ (ಬಳಕೆದಾರ ಸಲ್ಲಿಸಿದ ವಿಷಯ) ವಿಸ್ತರಿಸಬಾರದು. ಅಂತಹ ಮಾಹಿತಿಯ ನಕಲು ಮಾಡುವ ಅಧಿಕಾರವನ್ನು ಸಂಬಂಧಿಸಿದ ಹಕ್ಕುಸ್ವಾಮ್ಯದಾರರಿಂದ ಪಡೆಯಬೇಕು.

ಹೈಪರ್ಲಿಂಕಿಂಗ್ ನೀತಿ:

ಬಾಹ್ಯ ವೆಬ್‌ಸೈಟ್‌ಗಳ/ ಪೋರ್ಟಲ್‌ಗಳ ಲಿಂಕ್ ಗಳು

ಮೈಗವ್ ನಲ್ಲಿ ಹಲವು ಕಡೆ ಬೇರೆ ವೆಬ್‌ ಸೈಟ್ ‌ /ಪೋರ್ಟಲ್ ಗಳಿಗೆ ಲಿಂಕ್ ಗಳನ್ನು ಕಾಣಬಹುದು. ಈ ಲಿಂಕ್ ಗಳನ್ನು ನಿಮ್ಮ ಅನುಕೂಲಕ್ಕಾಗಿ ಇರಿಸಲಾಗಿದೆ. ಲಿಂಕ್ ಮಾಡಲಾದ ವೆಬ್‌ ಸೈಟ್ ‌ ಗಳಲ್ಲಿನ ವಿಷಯಗಳಿಗೆ ಮೈಗವ್ ಜವಾಬ್ದಾರನಲ್ಲ ಮತ್ತು ಅವುಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಮೈಗವ್ ಅನುಮೋದಿಸುವುದಿಲ್ಲ. ಲಿಂಕ್ ನ ಕೇವಲ ಉಪಸ್ಥಿತಿ ಅಥವಾ ಈ ವೆಬ್‌ ಸೈಟ್ ‌ ನಲ್ಲಿ ಪಟ್ಟಿಯಲ್ಲಿನ ಅದರ ಸೇರ್ಪಡೆಯನ್ನು ಯಾವುದೇ ರೀತಿಯ ಅನುಮೋದನೆ ಎಂದು ಭಾವಿಸಬಾರದು. ಈ ಲಿಂಕ್ ಗಳು ಸಾರ್ವಕಾಲಿಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾವು ಖಾತರಿಪಡಿಸಲು ಸಾಧ್ಯವಿಲ್ಲ ಮತ್ತು ಲಿಂಕ್ ಮಾಡಲಾದ ವೆಬ್‌ ಸೈಟ್ ‌ಗಳ ಲಭ್ಯತೆಯ ಮೇಲೆ ನಮಗೆ ಯಾವುದೇ ನಿಯಂತ್ರಣವಿರುವುದಿಲ್ಲ.

ಇತರ ವೆಬ್‌ ಸೈಟ್ ‌ ಗಳು / ಪೋರ್ಟಲ್ ಗಳಲ್ಲಿ ಮೈಗವ್ ಗೆ ಲಿಂಕ್ ಗಳು

ಈ ವೆಬ್ ಸೈಟ್ ನಲ್ಲಿ ಹೋಸ್ಟ್ ಮಾಡಲಾದ ಮಾಹಿತಿಗೆ ನೀವು ನೇರವಾಗಿ ಲಿಂಕ್ ಮಾಡುವುದನ್ನು ನಾವು ವಿರೋಧಿಸುವುದಿಲ್ಲ ಮತ್ತು ಇದಕ್ಕಾಗಿ ಯಾವುದೇ ಪೂರ್ವಾನುಮತಿ ಅಗತ್ಯವಿರುವುದಿಲ್ಲ. ಆದಾಗ್ಯೂ, ಈ ವೆಬ್‌ ಸೈಟ್ ‌ ಗೆ ಒದಗಿಸಲಾದ ಯಾವುದೇ ಲಿಂಕ್ ಗಳ ಬಗ್ಗೆ ನಮಗೆ ನೀವು ತಿಳಿಸಿದರೆ ಒಳಿತು, ಇದರಿಂದಾಗಿ ಇಲ್ಲಿನ ಯಾವುದೇ ಬದಲಾವಣೆಗಳು ಅಥವಾ ನವೀಕರಣಗಳ ಬಗ್ಗೆ ನಾವು ನಿಮಗೆ ತಿಳಿಸಬಹುದು. ಅಲ್ಲದೆ, ನಿಮ್ಮ ಸೈಟ್ ನಲ್ಲಿ ನಮ್ಮ ಪುಟಗಳನ್ನು ಫ್ರೆಮ್ ಗಳಾಗಿ ಲೋಡ್ ಮಾಡಲು ನಾವು ಅನುಮತಿಸುವುದಿಲ್ಲ. ಮೈಗವ್ ಗೆ ಸೇರಿದ ಪುಟಗಳು ಬಳಕೆದಾರರ ಹೊಸದಾಗಿ ತೆರೆದ ಬ್ರೌಸರ್ ವಿಂಡೋಗೆ ಲೋಡ್ ಆಗಬೇಕು.

ಗೌಪ್ಯತೆ ನೀತಿ

ಈ ವೆಬ್‌ ಸೈಟ್ ‌ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ನಮಗೆ ಅನುಮತಿಸುವಂತಹ ಯಾವುದೇ ನಿರ್ದಿಷ್ಟ ವೈಯಕ್ತಿಕ ಮಾಹಿತಿಯನ್ನು (ಹೆಸರು, ಫೋನ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸದಂತಹ ) ನಿಮ್ಮಿಂದ ಸೆರೆಹಿಡಿಯುವುದಿಲ್ಲ. ನೀವು ನಮ್ಮ ವೆಬ್‌ ಸೈಟ್ ‌ ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮಗೆ ಒದಗಿಸಲು ನೀವು ಆಯ್ಕೆ ಮಾಡಿದರೆ, ಆ ಮಾಹಿತಿಯನ್ನು ನಿಮ್ಮ ವಿನಂತಿಯನ್ನು ಪೂರೈಸಲು ಮಾತ್ರ ನಾವು ಬಳಸುತ್ತೇವೆ. ಮೈಗವ್ ಮೂಲಕ ಸರ್ಕಾರದೊಂದಿಗೆ ಪಾಲ್ಗೊಳ್ಳಲು ಮತ್ತು ತೊಡಗಿಸಿಕೊಳ್ಳಲು ನಿಮ್ಮ ನೋಂದಣಿಯ ಅಗತ್ಯವಿರುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಪರಸ್ಪರ ಒಡನಾಟಕ್ಕೆ ಅನುಕೂಲವಾಗುವಂತೆ ಬಳಸಲಾಗುತ್ತದೆ.

ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ಮೈಗವ್ ಹಲವು ರಸಪ್ರಶ್ನೆ, ಹ್ಯಾಕಥಾನ್ ಮತ್ತು ಸ್ಪರ್ಧೆಗಳನ್ನು ನಡೆಸುತ್ತಿದೆ. ವಿಜೇತರ ವೈಯಕ್ತಿಕ ವಿವರಗಳನ್ನು ಸ್ಪರ್ಧಾ ಆಯೋಜಕರು/ಸಹಯೋಗಿ ಇಲಾಖೆಗಳೊಂದಿಗೆ ಹಂಚಿಕೊಳ್ಳಬಹುದು. ವೈಯಕ್ತಿಕವಾಗಿ ಗುರುತಿಸಬಹುದಾದ ಯಾವುದೇ ಮಾಹಿತಿ ಇಲ್ಲದೆ ವಿಜೇತರ ಹೆಸರುಗಳನ್ನು ಮೈಗವ್ ತಂಡ ಮತ್ತು ಸ್ಪರ್ಧಾ ಆಯೋಜಕರು/ಸಹಯೋಗಿ ಇಲಾಖೆಗಳು ಎಲೆಕ್ಟ್ರಾನಿಕ್/ಮುದ್ರಣ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಬಹುದು.

ಮೇಲಿನ ಪ್ಯಾರಾದಲ್ಲಿ ವಿವರಿಸಿದಂತೆ ವಿಜೇತರ ಮಾಹಿತಿಯನ್ನು ಹೊರತುಪಡಿಸಿ ಈ ಸೈಟ್ ನಲ್ಲಿ ಸ್ವಯಂಪ್ರೇರಿತವಾಗಿ ಹಂಚಿಕೊಳ್ಳಲಾದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾವುದೇ ಮೂರನೇ ವ್ಯಕ್ತಿಗೆ (ಸಾರ್ವಜನಿಕ / ಖಾಸಗಿ) ಮೈಗವ್ ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ. ಮೈಗವ್ ನಲ್ಲಿ ಒದಗಿಸಲಾದ ಯಾವುದೇ ಮಾಹಿತಿಯನ್ನು ನಷ್ಟ, ದುರುಪಯೋಗ, ಅನಧಿಕೃತ ಪ್ರವೇಶ ಅಥವಾ ಬಹಿರಂಗಪಡಿಸುವಿಕೆ, ಬದಲಾವಣೆ, ಅಥವಾ ವಿನಾಶದಿಂದ ರಕ್ಷಿಸಲಾಗುತ್ತದೆ.

ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸ, ಡೊಮೇನ್ ಹೆಸರು, ಬ್ರೌಸರ್ ಪ್ರಕಾರ, ಆಪರೇಟಿಂಗ್ ಸಿಸ್ಟಂ, ಭೇಟಿಯ ದಿನಾಂಕ ಮತ್ತು ಸಮಯ ಮತ್ತು ಭೇಟಿ ನೀಡಿದ ಪುಟಗಳಂತಹ ಬಳಕೆದಾರನ ಬಗ್ಗೆ ಕೆಲವು ಮಾಹಿತಿಯನ್ನು ಮೈಗವ್ ಕಲೆಹಾಕುತ್ತದೆ. ಮೈಗವ್ ಹಾನಿಗೊಳಿಸುವ ಪ್ರಯತ್ನವಿದ್ದ ಸಂದರ್ಭದ ಹೊರತಾಗಿ ಮೈಗವ್ ಈ ವಿಳಾಸಗಳನ್ನು ನಮ್ಮ ಸೈಟ್ ಗೆ ಭೇಟಿ ನೀಡುವ ವ್ಯಕ್ತಿಗಳ ಗುರುತಿಗೆ ಲಿಂಕ್ ಮಾಡಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ.

ಕುಕೀಸ್ ಪಾಲಿಸಿ

ಕುಕೀ - ನೀವು ಒಂದು ಸೈಟ್ ನಲ್ಲಿ ಮಾಹಿತಿಯನ್ನು ಬಳಸಿದಾಗ ಇಂಟರ್ನೆಟ್ ವೆಬ್ ಸೈಟ್ ನಿಮ್ಮ ಬ್ರೌಸರ್ ಗೆ ಕಳುಹಿಸುವ ಸಾಫ್ಟ್ವೇರ್ ಕೋಡ್ ನ ತುಣುಕನ್ನು ಕುಕೀ ಎನ್ನಲಾಗುತ್ತದೆ. ಕುಕೀ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ವೆಬ್‌ಸೈಟ್ ‌ ನ ಸರ್ವರ್ನಿಂದ ಸರಳ ಟೆಕ್ಸ್ಟ್ ಫೈಲ್ ಆಗಿ ಸಂಗ್ರಹಿಸಲ್ಪಡುತ್ತದೆ ಮತ್ತು ಆ ಸರ್ವರ್ ಮಾತ್ರ ಆ ಕುಕೀನ ವಿಷಯಗಳನ್ನು ಮರುಪಡೆಯಲು ಅಥವಾ ಓದಲು ಸಾಧ್ಯವಾಗುತ್ತದೆ. ಕುಕೀಗಳು ನಿಮ್ಮ ಆದ್ಯತೆಗಳನ್ನು ಸಂಗ್ರಹಿಸುವುದರಿಂದ ಪುಟಗಳ ನಡುವೆ ಸಮರ್ಥವಾಗಿ ನ್ಯಾವಿಗೇಟ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ, ಮತ್ತು ವೆಬ್‌ಸೈಟ್ ‌ ನ ನಿಮ್ಮ ಸಾಮಾನ್ಯ ಅನುಭವವನ್ನು ಸುಧಾರಿಸುತ್ತದೆ. ನಿಮ್ಮ ಅನುಭವ ಮತ್ತು ಒಡನಾಟವನ್ನು ಹೆಚ್ಚಿಸಲು ಮೈಗವ್ ಅದರ ಉಪ-ಡೊಮೇನ್ ಗಳೊಂದಿಗೆ ಕೆಳಗಿನ ರೀತಿಯ ಕುಕೀಗಳನ್ನು ಬಳಸುತ್ತದೆ:

1. ಬ್ರೌಸಿಂಗ್ ಮಾದರಿಗಳ ಟ್ರ್ಯಾಕ್ ಇರಿಸಿಕೊಳ್ಳಲು ನೀವು ನಮ್ಮ ವೆಬ್‌ಸೈಟ್ ‌ ಗೆ ಭೇಟಿ ನೀಡಿದಾಗ ಅನಾಮಧೇಯವಾಗಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನವನ್ನು ನೆನಪಿನಲ್ಲಿರಿಸಲು ಅನಾಲಿಟಿಕ್ಸ್ ಕುಕೀಗಳು.

2. ನಮ್ಮ ವೆಬ್‌ಸೈಟ್ ‌ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನಮಗೆ ಸಹಾಯ ಮಾಡಲು ಸರ್ವಿಸ್ ಕುಕೀಸ್, ಇವು ನಿಮ್ಮ ನೋಂದಣಿ ಮತ್ತು ಲಾಗಿನ್ ವಿವರಗಳು, ಸೆಟ್ಟಿಂಗ್ ಆದ್ಯತೆಗಳನ್ನು ನೆನಪಿಸಿಕೊಳ್ಳುತ್ತದೆ, ಮತ್ತು ನೀವು ವೀಕ್ಷಿಸುವ ಪುಟಗಳ ಟ್ರ್ಯಾಕ್ ಅನ್ನು ಇರಿಸಿಕೊಳ್ಳುತ್ತದೆ.

3. ನಾನ್-ಪರ್ಸಿಸ್ಟೆಂಟ್ ಕುಕೀಸ್ ಎಂದರೆ ಪರ್-ಸೆಷನ್ ಕುಕೀಸ್. ಪರ್-ಸೆಷನ್ ಕುಕೀಗಳು ತಾಂತ್ರಿಕ ಉದ್ದೇಶಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಮೈಗವ್ ಮತ್ತು ಅದರ ಉಪ-ಡೊಮೇನ್ ಗಳ ಮೂಲಕ ತಡೆರಹಿತ ನ್ಯಾವಿಗೇಷನ್ ಅನ್ನು ಒದಗಿಸುತ್ತದೆ. ಈ ಕುಕೀಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ನೀವು ನಮ್ಮ ವೆಬ್‌ಸೈಟ್ ‌ ನಿಂದ ಹೊರಬಂದ ತಕ್ಷಣ ಅವುಗಳನ್ನು ಅಳಿಸಲಾಗುತ್ತದೆ. ಕುಕೀಸ್ ಶಾಶ್ವತವಾಗಿ ಡೇಟಾವನ್ನು ರೆಕಾರ್ಡ್ ಮಾಡುವುದಿಲ್ಲ ಮತ್ತು ಅವುಗಳನ್ನು ನಿಮ್ಮ ಕಂಪ್ಯೂಟರ್ನ ಹಾರ್ಡ್ ಡ್ರೈವ್ ನಲ್ಲಿ ಸಂಗ್ರಹಿಸಲಾಗುವುದಿಲ್ಲ. ಕುಕೀಗಳನ್ನು ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸಕ್ರಿಯ ಬ್ರೌಸರ್ ಸೆಷನ್ ನಲ್ಲಿ ಮಾತ್ರ ಲಭ್ಯವಿರುತ್ತದೆ. ಮತ್ತೊಮ್ಮೆ, ನಿಮ್ಮ ಬ್ರೌಸರ್ ಅನ್ನು ನೀವು ಮುಚ್ಚಿದ ನಂತರ, ಕುಕೀ ಕಣ್ಮರೆಯಾಗುತ್ತದೆ.

ನಿಮ್ಮ ಲಾಗಿನ್ ಅಗತ್ಯತೆ ಇರುವ, ಅಥವಾ ಕಸ್ಟಮೈಸ್ ಮಾಡಬಹುದಾದಂತಹ ಮೈಗವ್ ಮತ್ತು ಅದರ ಉಪ-ಡೊಮೇನ್ ಗಳಿಗೆ ನೀವು ಭೇಟಿ ನೀಡಿದಾಗ, ನೀವು ಕುಕೀಗಳನ್ನು ಸ್ವೀಕರಿಸಬೇಕಾಗಬಹುದು ಎಂದು ಗಮನಿಸಿ. ನಿಮ್ಮ ಬ್ರೌಸರ್ ಕುಕೀಗಳನ್ನು ನಿರಾಕರಿಸಬೇಕೆಂದು ನೀವು ಆಯ್ಕೆ ಮಾಡಿದರೆ, ಮೈಗವ್ನ ಸಬ್ ಡೊಮೇನ್ ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.

ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ ಮತ್ತು ಅರ್ಥೈಸಲಾಗುತ್ತದೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸಬಹುದಾದ ಯಾವುದೇ ವಿವಾದವು ಭಾರತದ ನ್ಯಾಯಾಲಯಗಳ ವಿಶೇಷ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.