ಹೋಮ್ | ಮೈಗವ್

ಪ್ರವೇಶಿಸುವಿಕೆ
ಪ್ರವೇಶಿಸುವಿಕೆ ಪರಿಕರಗಳು
ಬಣ್ಣ ಹೊಂದಾಣಿಕೆ
ಪಠ್ಯ ಗಾತ್ರ
ನ್ಯಾವಿಗೇಷನ್ ಹೊಂದಾಣಿಕೆ

ಮೈಗವ್ - FAQ

ಮೈಗವ್ ಎಂದರೇನು

ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ತಂತ್ರಜ್ಞಾನದ ಸಹಾಯದಿಂದ ನಾಗರಿಕರು ಮತ್ತು ಸರ್ಕಾರದ ನಡುವೆ ಪಾಲುದಾರಿಕೆಯನ್ನು ರಚಿಸಲು ಮೈಗವ್ ಎನ್ನುವ ನವೀನ ವೇದಿಕೆಯನ್ನು ಆರಂಭಿಸಲಾಗಿದೆ. ಈ ವೇದಿಕೆಯ ಮೂಲಕ, ಉತ್ತಮ ಆಡಳಿತದ ಕಡೆಗೆ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ. ನಾಗರಿಕರ ಆಲೋಚನೆಗಳು, ಸಲಹೆಗಳು ಮತ್ತು ಅವರ ಕೊಡುಗೆಗಳನ್ನು ಇದು ಆಧರಿಸಿದೆ. ರಾಷ್ಟ್ರ ನಿರ್ಮಾಣದ ಈ ವಿಶಿಷ್ಟ ಉಪಕ್ರಮದಲ್ಲಿ ನಾಗರಿಕರು ಭಾಗವಹಿಸಬಹುದು. ಈ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದಾದ್ಯಂತದ ನಾಗರಿಕರು ವಿವಿಧ ನೀತಿಗಳು, ಕಾರ್ಯಕ್ರಮಗಳು, ಯೋಜನೆಗಳು ಇತ್ಯಾದಿ ಸಂಬಂಧಿತ ಕ್ಷೇತ್ರಗಳಲ್ಲಿ ತಮ್ಮ ತಜ್ಞ ಆಲೋಚನೆಗಳು, ವಿಚಾರಗಳು ಮತ್ತು ಸಲಹೆಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಿದ್ದಾರೆ. ಸರ್ಕಾರದೊಂದಿಗೆ ಕೈ ಜೋಡಿಸಿ ಕೆಲಸ ಮಾಡುವ ನಿಟ್ಟಿನಲ್ಲಿ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಮೈಗವ್ ಹೊಂದಿದೆ.

ನಾನು ಮೈಗವ್ಗೆ ಹೇಗೆ ಸೇರಬಹುದು

ಭಾಗವಹಿಸಲು https://www.mygov.in ನಲ್ಲಿ ನೋಂದಾಯಿಸಿಕೊಳ್ಳಿ. ಅದಕ್ಕಾಗಿ, ಹೆಸರು, ಇಮೇಲ್ ಐಡಿ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನುನೀಡಬೇಕಾಗುತ್ತದೆ. ನೀವು ಯಾವ ಕೌಶಲ್ಯಗಳನ್ನು ಹೊಂದಿದ್ದೀರಿ ಮತ್ತು ನೀವು ಯಾವ ರೀತಿಯ ಸಮಸ್ಯೆಗಳಿಗೆ ಸಲಹೆಗಳನ್ನು ಒದಗಿಸಲು ಇಷ್ಟಪಡುತ್ತಿರಿ ಎನ್ನುವುದನ್ನೂ ತಿಳಿಸಬೇಕಾಗುತ್ತದೆ.

ಈ ಸೈಟ್ ನಲ್ಲಿ ಸಂಯಂಪ್ರೇರಿತವಾಗಿ ಹಂಚಿಕೊಳ್ಳಲಾದ ವೈಯಕ್ತಿಕವಾಗಿ ಗುರುತಿಸುವ ಮಾಹಿತಿಯನ್ನು ಯಾವುದೇ ಮೂರನೇ ವ್ಯಕ್ತಿ (ಸಾರ್ವಜನಿಕ / ಖಾಸಗಿ) ಯೊಂದಿಗೆ ಮೈಗವ್ ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. ಈ ವೆಬ್‌ಸೈಟ್‌ ಗೆ ಒದಗಿಸಲಾದ ಯಾವುದೇ ಮಾಹಿತಿಯನ್ನು ನಷ್ಟ, ದುರುಪಯೋಗ, ಅನಧಿಕೃತ ಪ್ರವೇಶ, ಬಹಿರಂಗಪಡಿಸುವಿಕೆ, ಬದಲಾವಣೆ, ಅಥವಾ ವಿನಾಶದಿಂದ ರಕ್ಷಿಸಲಾಗುತ್ತದೆ.

ಸರ್ಕಾರಿ ನೌಕರರಿಗಾಗಿ

ನೀವು ಸರ್ಕಾರಿ ನೌಕರರಾಗಿದ್ದು @gov.in ಅಥವಾ @nic.in ಇಮೇಲ್ ಐಡಿ ಹೊಂದಿದ್ದಾರೆ, ನೀವು ಯಾವುದೇ ಇತರ ವಿವರಗಳನ್ನು ಒದಗಿಸದೆಯೇ ಲಾಗಿನ್ ಆಗಲು ಅದರದ್ದೇ ರುಜುವಾತುಗಳನ್ನು ಬಳಸಬಹುದು.

ಸಾರ್ವಜನಿಕರಿಗೆ

ಸಾರ್ವಜನಿಕರಿಗೆ, ನಿಮ್ಮ ಮಾನ್ಯ ಇಮೇಲ್ ID ಮತ್ತು ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ ಮೂಲಕನೀವು ಮೈಗವ್ ಗೆ ನೋಂದಾಯಿಸಿಕೊಳ್ಳಬಹುದು. ಲಾಗಿನ್ ಮಾಡುವಾಗ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಬಳಸಬಹುದು. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿದಾಗ, ನಿಮ್ಮ ಇಮೇಲ್ ಗೆ ಒನ್ ಟೈಂ ಪಾಸ್ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಲಾಗಿನ್ ಆಗಲು ಯಾವುದೇ ಪಾಸ್ವರ್ಡ್ ನೆನಪಿಡುವ ಅಗತ್ಯವಿಲ್ಲ. ಪರ್ಯಾಯವಾಗಿ, ನೀವು ಮೈಗವ್ನೊಂದಿಗೆ ನಿರ್ವಹಿಸಿದಂತೆ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಿ ಸೈನ್ ಇನ್ ಮಾಡಬಹುದು.

ಭಾಗವಹಿಸುವ ವಿಧಾನಗಳು ಯಾವುವು?

ಈ ವೇದಿಕೆಯು ವಿವಿಧ ನಿರ್ದಿಷ್ಟ ಗುಂಪುಗಳನ್ನು ಒಳಗೊಂಡಿದೆ, ಅಲ್ಲಿ ನಾಗರಿಕರು (ಆನ್ಲೈನ್ ಮತ್ತು ಆನ್ಲೈನ್‌ಏತರ ಎರಡೂ) ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ಮತ್ತು ನಿರ್ದಿಷ್ಟ ಗುಂಪಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳು, ಚರ್ಚೆಗಳು, ಮತದಾನಗಳು, ಮಾತುಕತೆಗಳು ಮತ್ತು ಬ್ಲಾಗ್ ಗಳ ಮೂಲಕ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ಗುಂಪುಗಳು: ಸರ್ಕಾರದೊಂದಿಗೆ ಕೈಜೋಡಿಸಿ!

ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನೂ ಕೇಳಲು ಬಯಸುವ ಸರ್ಕಾರ ಮತ್ತು ಅದರ ಸಂಬಂಧಿತ ಏಜೆನ್ಸಿಗಳಿಂದ ವಿಶಾಲ ವ್ಯಾಪ್ತಿಯ ಸಾರ್ವಜನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಂದ ಅನ್ವೇಷಿಸಿ ಆಯ್ಕೆಮಾಡಿ. ಈ ಗುಂಪುಗಳಲ್ಲಿ ನೀವು ಭಾಗಿಯಾಗಿ ಸಂಬಂಧಿತ ವಿಷಯಗಳ ಬಗ್ಗೆ ನಿಮ್ಮ ಮೌಲ್ಯಯುತ ಸಲಹೆಗಳು ಮತ್ತು ಪ್ರಸ್ತಾಪವನ್ನು ವ್ಯಕ್ತಪಡಿಸಿ. ಪೋರ್ಟಲ್ ನಲ್ಲಿ ಗುಂಪು ವಿಷಯಗಳು ಎಂದು ಉಲ್ಲೇಖಿಸಲಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆಯನ್ನು ಕೋರುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ ಓರ್ವ ನಾಗರಿಕರು ಕೇವಲ 4 ಗುಂಪುಗಳಳ್ಳಿ ಭಾಗವಹಿಸಬಹುದು.

ಚರ್ಚೆ: ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ

ಮೈಗವ್ ನಲ್ಲಿ ನಿಮ್ಮ ಮೌಲ್ಯಯುತ ಸಲಹೆಗಳು ಮತ್ತು ವಿಷಯಾಧಾರಿತ ಚರ್ಚೆಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ನಿಮ್ಮ ಅಭಿಪ್ರಾಯಗಳು ಮೌಲ್ಯಯುತವಾಗಿದ್ದು, ಸರ್ಕಾರವು ತನ್ನ ನೀತಿ ಉಪಕ್ರಮಗಳನ್ನು ಸುಧಾರಿಸಲು ನಿಮ್ಮ ಅನಿಸಿಕೆಗಳನ್ನು ಕೇಳಲು ಉತ್ಸುಕವಾಗಿದೆ. ಆದ್ದರಿಂದ, ಚರ್ಚೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಮತ್ತು ನೀತಿ ನಿರೂಪಣೆಯ ಪ್ರಕ್ರಿಯೆಗೆ ಸಕ್ರಿಯವಾಗಿ ನಿಮ್ಮ ಕೊಡುಗೆ ನೀಡಿ.

ಚಟುವಟಿಕೆ: ರಾಷ್ಟ್ರ ನಿರ್ಮಾಣಕ್ಕಾಗಿ ನಿಮ್ಮ ಸಮಯವನ್ನು ವಿನಿಯೋಗಿಸಿ!

ಆಡಳಿತ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರರಾಗಿ. ಕೇವಲ ಅದರ ಸೂತ್ರೀಕರಣದಲ್ಲಿ ಮಾತ್ರವಲ್ಲದೆ ಅನುಷ್ಠಾನದಲ್ಲೂ ಕೂಡ. ಮೈಗವ್ ಪೋರ್ಟಲ್ ಮೂಲಕ ಸರ್ಕಾರವು ಈ ಕಾರ್ಯಕ್ಕೆ ಮೀಸಲಾಗಿರುವ ಗುಂಪು ಆಧಾರಿತ ಮತ್ತು ವೈಯಕ್ತಿಕ ಚಟುವಟಿಕೆಗಳ ಮೂಲಕ ಸರ್ಕಾರದ ನೀತಿ ಅನುಷ್ಠಾನ ಅಭಿಯಾನದಲ್ಲಿ ಪಾಲುದಾರರಾಗಲು ನಿಮಗೆ ಅವಕಾಶ ನೀಡುತ್ತಿದೆ. ಚಟುವಟಿಕೆಗಳನ್ನು ತೆಗೆದುಕೊಳ್ಳಿ ಮತ್ತು ವೈಯಕ್ತಿಕ ಮಟ್ಟದಲ್ಲಿ ನೀತಿಯ ಗುರಿಗಳನ್ನು ಮತ್ತು ಅನುಷ್ಠಾನವನ್ನು ಮುಂದಕ್ಕೊಯ್ಯಲು ಸರ್ಕಾರಕ್ಕೆ ಸಹಾಯ ಮಾಡಿ.

ಒಂದು ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರಿಂದ ನಾಗರಿಕರು ಕ್ರೆಡಿಟ್ ಪಾಯಿಂಟ್ ಗಳನ್ನು ಗಳಿಸಲು ಸಾಧ್ಯವಾಗುತ್ತದೆ ಮತ್ತು ಗೌರವಾನ್ವಿತ ಭಾರತದ ಪ್ರಧಾನಿಯೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ.

ಬ್ಲಾಗ್: ಆಗುಹೋಗುಗಳ ಬಗ್ಗೆ ಮಾಹಿತಿ ಇರಲಿ ಮತ್ತು ಪ್ರಮುಖ ಮೈಗವ್ ಉಪಕ್ರಮಗಳ ಬಗ್ಗೆ ತಪ್ಪದೆ ತಿಳಿದಿರಿ

ಮೈಗವ್ ಬ್ಲಾಗ್ ಈ ಪೋರ್ಟಲ್ ನ ಒಂದು ಪ್ರಮುಖ ಭಾಗವಾಗಿದ್ದು, ಇದು ಮೈಗವ್ ಪೋರ್ಟಲ್ ನಲ್ಲಿರುವ ಸರ್ಕಾರದ ಉಪಕ್ರಮಗಳು ಮತ್ತು ಚಟುವಟಿಕೆಗಳ ತಾಜಾ ಸುದ್ದಿಗಳನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ. ಇದು ಪ್ರಚಲಿತ ಸಮಸ್ಯೆಗಳ ಬಗ್ಗೆ ನಿಮಗೆ ಉತ್ತಮ ಮಾಹಿತಿಯನ್ನು ಒದಗಿಸುತ್ತದೆ - ಈ ಪೋರ್ಟಲ್ ಮೂಲಕ ನೀವು ನಿಮ್ಮ ಭಾಗವಹಿಸುವಿಕೆಯನ್ನು ಆದ್ಯತೆಯ ಆಧಾರದ ಮೇಲೆ ಯೋಜಿಸಬಹುದಾಗಿದೆ.

ಮಾತಕತೆ: ಸಂಪರ್ಕದಲ್ಲಿರಿ!

ಸರ್ಕಾರದ ಪ್ರತಿನಿಧಿಗಳೊಂದಿಗೆ ಲೈವ್ ಚಾಟ್ ಮೂಲಕ ಸಂಪರ್ಕ ಸಾಧಿಸಲು ಮೈಗವ್ ಪೋರ್ಟಲ್ ನಿಮಗೆ ಅವಕಾಶ ನೀಡುತ್ತದೆ. ರಿಯಲ್ ಟೈಂ ಆಧಾರದ ಮೇಲೆ ಅನಿಸಿಕೆ-ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ವಿನಿಮಯ ಮಾಡಲು ನಿಮಗೆ ಸಹಾಯ ಮಾಡುವ ವಿಶಿಷ್ಟ ವೇದಿಕೆ ಇದಾಗಿದೆ. ಅಷ್ಟೇ ಅಲ್ಲದೆ, ಇದು ಸರ್ಕಾರಿ ಸಂಸ್ಥೆಗಳಿಗೆ ತಮ್ಮ ಉಪಕ್ರಮಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ನಾಗರಿಕರೊಂದಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ಮತದಾನ: ನಿಮ್ಮ ಅಭಿಪ್ರಾಯ ತಿಳಿಸಿ!

ಮೈಗವ್ ಪೋಲ್ಸ್ ಆನ್ ಲೈನ್ ಮತದಾನದ ಮೂಲಕ ನಿರ್ದಿಷ್ಟ ನೀತಿಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನಾಗರಿಕರಿಗೆ ನೀಡುತ್ತದೆ, ತನ್ನ ನೀತಿಯ ಉಪಕ್ರಮಗಳ ಪರಿಣಾಮಕಾರಿತ್ವ ಮತ್ತು ಸ್ವೀಕಾರದ ಬಗ್ಗೆ ಸರ್ಕಾರಕ್ಕೆ ಉತ್ತಮ ಕಲ್ಪನೆಯನ್ನು ನೀಡುತ್ತದೆ. ಇದು ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ತನ್ನ ನೀತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ನಾಗರಿಕರು ನೇರವಾಗಿ ಕೊಡುಗೆ ನೀಡಲು ಸಾಧ್ಯವಾಗಿಸುವ ಒಂದು ಪರಿಣಾಮಕಾರಿ ಸಾಧನವಾಗಿದೆ.

ನಾನು ಏಕೆ ಭಾಗವಹಿಸಬೇಕು?

ಮೈಗವ್ ನಾಗರಿಕರ ಪಾಲ್ಗೊಳ್ಳುವಿಕೆ ಮೂಲಕ ಸಹಭಾಗಿತ್ವದ ಆಡಳಿತವನ್ನು ಪ್ರೋತ್ಸಾಹಿಸುವ ಒಂದು ವಿಶಿಷ್ಟ ವೇದಿಕೆಯಾಗಿದೆ. ಮೈಗವ್ ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ, ಸಾರ್ವಜನಿಕರು ಮಹತ್ವದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಚರ್ಚೆಗಳ ಮೂಲಕ ಹಂಚಿಕೊಳ್ಳಲು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಈ ಪೋರ್ಟಲ್ ನಲ್ಲಿ ನಿಗದಿಪಡಿಸಲಾದ ಚಟುವಟಿಕೆಗಳ ಮೂಲಕ ಆಡಳಿತ ಉಪಕ್ರಮಗಳಲ್ಲಿ ನೇರವಾಗಿ ಪಾಲ್ಗೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಾರ್ವಜನಿಕ ಒಳಿತಿಗಾಗಿ ವಿವಿಧ ಉಪಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಗವ್ ನಿಮ್ಮನ್ನು ಸಬಲರನ್ನಾಗಿ ಮಾಡುತ್ತದೆ ಮತ್ತು ಸರ್ಕಾರದ ನೀತಿ ಉಪಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಿಮಗೆ ಅವಕಾಶ ನೀಡುತ್ತದೆ . ಮೈಗವ್ ನಿಮ್ಮನ್ನು ಬದಲಾವಣೆಯ ಕಾರಕರನ್ನಾಗಿ ಮಾಡುತ್ತದೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯಾಣದಲ್ಲಿ ಮತ್ತು 'ಸುರಾಜ್ಯ'ವನ್ನು ಸಾಧಿಸುವತ್ತ ಕೊಡುಗೆ ನೀಡಲು ನಿಮಗೆ ಒಂದು ಸುವರ್ಣ ಅವಕಾಶವನ್ನು ನೀಡುತ್ತದೆ

ಭಾಗವಹಿಸುವುದರಿಂದ ಏನು ಪ್ರಯೋಜನ?

ಚರ್ಚೆಗಳ ಬಗ್ಗೆ ನಿಮ್ಮ ಅನಿಸಿಕೆ -ಅಭಿಪ್ರಾಯಗಳನ್ನು ಪೋಸ್ಟ್ ಮಾಡುವ ಮೂಲಕ, ನೀವು ಸ್ವಯಂಸೇವಕರಾಗಿ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಿಚಾರಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಮೂಲಕ ಕ್ರೆಡಿಟ್ ಅಂಕಗಳನ್ನು ಪಡೆಯುತ್ತಿರಿ. ಮೈಗವ್ ತನ್ನ ವಿವಿಧ ವೈಶಿಷ್ಟ್ಯಗಳು ಮತ್ತು ಉಪಕ್ರಮಗಳ ಮೂಲಕ ನಿಮಗೆ ನಿಯಮಿತವಾಗಿ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಮತ್ತು ನೀತಿ ರಚನೆ ಮತ್ತು ಆಡಳಿತಕ್ಕೆ ಕೊಡುಗೆ ನೀಡಲು ರೆಡಿಮೇಡ್ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಕ್ರೆಡಿಟ್ ಪಾಯಿಂಟ್ ಗಳ ಆಧಾರದ ಮೇಲೆ ಪ್ರೋತ್ಸಾಹಕಗಳನ್ನು ಭವಿಷ್ಯದಲ್ಲಿ ಘೋಷಿಸಲಾಗುತ್ತದೆ. ನಿಯತಕಾಲಿಕವಾಗಿ, ಆಯ್ದ ಸ್ವಯಂಸೇವಕರು / ಸಾಧಕರು ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ಮತ್ತು / ಅಥವಾ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ತಲುಪಿಸಬಹುದು.

ಇದಲ್ಲದೆ, ಮೈಗವ್ ನಿಮಗೆ ರಾಷ್ಟ್ರ ನಿರ್ಮಾಣದಲ್ಲಿ ಸಹಾಯ ಮಾಡುವ ಅವಕಾಶವನ್ನು ನೀಡುತ್ತದೆ ಮತ್ತು ನಿಮ್ಮನ್ನು ಸಹಭಾಗಿತ್ವ ಆಡಳಿತದ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ.

ಅನುಚಿತ ಪೋಸ್ಟ್ ಅನ್ನು ನಾನು ಹೇಗೆ ವರದಿ ಮಾಡಬಹುದು?

ನಿರ್ದಿಷ್ಟ ಪೋಸ್ಟ್ ಅಥವಾ ವಿಷಯವು ಅನುಚಿತ ಅಥವಾ ಸೂಕ್ತವಲ್ಲ ಎಂದು ನಿಮಗನಿಸಿದರೆ, ಪ್ರತಿ ಚರ್ಚೆ ಅಥವಾ ಟಾಸ್ಕ್ ಪೋಸ್ಟ್ ಗೆ ಲಗತ್ತಿಸಲಾದ ಸ್ಪ್ಯಾಮ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ನಿರ್ದಿಷ್ಟ ಕಾಮೆಂಟ್ ಅನ್ನು ವರದಿ ಮಾಡಬಹುದು. ಒಮ್ಮೆ ವರದಿಯಾದ ನಂತರ, ಮೈಗವ್ ನ ಐದು ಬಳಕೆದಾರರು ಅದರ ಅನುಚಿತತೆಗೆ ಪೋಸ್ಟ್ ಅನ್ನು ವರದಿ ಮಾಡಿದರೆ ಆ ಪೋಸ್ಟ್ ಅನ್ನು ವೆಬ್‌ಸೈಟ್‌ ನಿಂದ ತೆಗೆದುಹಾಕಲಾಗುತ್ತದೆ.

ನಾನು ನನ್ನ ಪ್ರತಿಕ್ರಿಯೆಗಳನ್ನು ಹೇಗೆ ಕಳುಹಿಸಬಹುದು

ಮೈಗವ್ ವೇದಿಕೆಗೆ ಸಂಬಂಧಿಸಿದಂತೆ ವಿಷಯ, ವಿನ್ಯಾಸ, ಸೇವೆ ಅಥವಾ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಈ ಕಸ್ಟಮೈಸ್ಡ್ ಫೀಡ್ಬ್ಯಾಕ್ ಇಂಟರ್ಫೇಸ್ ಮೂಲಕ ಕಳುಹಿಸಬಹುದು.

ನೋಂದಣಿ ಅಥವಾ ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತೀರಾ?

ನೋಂದಣಿ ಅಥವಾ ಲಾಗಿನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ದಯವಿಟ್ಟು ಈ ಫಾರ್ಮ್ ಮೂಲಕ ನಮ್ಮನ್ನು ಸಂಪರ್ಕಿಸಿ. ಮೈಗವ್ ನಲ್ಲಿ ನಾವು ನಿಮ್ಮ ಭಾಗವಹಿಸುವಿಕೆಯನ್ನು ಗೌರವಿಸುತ್ತೇವೆ, ಹಾಗಾಗಿ, ಮೈಗವ್ ಮೂಲಕ ಬ್ರೌಸ್ ಮಾಡುವಾಗ ಮತ್ತು/ಅಥವಾ ಭಾಗವಹಿಸುವಾಗ ನೀವು ಎದುರಿಸಬಹುದಾದ ಸಮಸ್ಯೆಗಳನ್ನು ನಾವು ಆದ್ಯತೆಯಲ್ಲಿ ಪರಿಹರಿಸುವ ಭರವಸೆ ನೀಡುತ್ತೇವೆ.

ವೇದಿಕೆಯಲ್ಲಿ ನಿಮ್ಮ ಸಲಹೆಗಳು ಕಾಣುತ್ತಿಲ್ಲವೇ?

ನಮ್ಮನ್ನು ಸಂಪರ್ಕಿಸಲು ಹಿಂಜರಿಯದಿರಿ, ಮೈಗವ್ ನಲ್ಲಿ ನಾವು ನಿಮ್ಮ ಭಾಗವಹಿಸುವಿಕೆಯನ್ನು ಗೌರವಿಸುತ್ತೇವೆ, ಹಾಗಾಗಿ ನಿಮ್ಮ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸುತ್ತೇವೆ.

ಚಟುವಟಿಕೆ ಪ್ರತಿಕ್ರಿಯೆ

ನೀವು ಸ್ವೀಕರಿಸಿರುವ ಚಟುವಟಿಕೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ದಯವಿಟ್ಟು ಪ್ರತಿಕ್ರಿಯೆ ಫಾರ್ಮ್ ಮೂಲಕ ನಮ್ಮನ್ನು ಸಂಪರ್ಕಿಸಿ. ನೀವು ಭಾಗಿಯಾಗಿರುವ ಚಟುವಟಿಕೆಯ ಬಗ್ಗೆ ಸಲಹೆಗಳನ್ನು ಹೊಂದಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಚಟುವಟಿಕೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಒದಗಿಸಲು ಬಯಸಿದರೆ ದಯವಿಟ್ಟು ಈ ಪ್ರತಿಕ್ರಿಯೆ ಫಾರ್ಮ್ ಮೂಲಕ ನಮ್ಮನ್ನು ಸಂಪರ್ಕಿಸಿ.

ಚರ್ಚೆ ಪ್ರತಿಕ್ರಿಯೆಗಳು

ಚರ್ಚೆಯ ಥ್ರೆಡ್ (Discussion thread) ಗಳಿಗೆ ಸಂಬಂಧಿಸಿದಂತೆ ನಮಗೆ ಪ್ರತಿಕ್ರಿಯೆಯನ್ನು ನೀಡಲು ಅಥವಾ ಚರ್ಚೆಯ ಕ್ರಮದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ವರದಿ ಮಾಡಲು ದಯವಿಟ್ಟು ಈ ಪ್ರತಿಕ್ರಿಯೆ ಫಾರ್ಮ್ ಮೂಲಕ ನಮಗೆ ತಿಳಿಸಿ.

ಇತರ ಸಮಸ್ಯೆ

ಮೇಲೆ ತಿಳಿಸಿದ ವಿಭಾಗಗಳ ಹೊರತಾಗಿ, ಸೈಟ್ ಗೆ ಸಂಬಂಧಿಸಿದಂತೆ ನೀವು ಇತರ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಹಿಂಜರಿಯದಿರಿ. ನೀವು ಎದುರಿಸುತ್ತಿರುವ ಸಮಸ್ಯೆಯ ಸಂಕ್ಷಿಪ್ತ ವಿವರಣೆಯೊಂದಿಗೆ ನಿಮ್ಮ ಸಮಸ್ಯೆಯ ಬಗ್ಗೆ ನಮಗೆ ತಿಳಿಸಿ. ನಾವು ನಿಮಗೆ ಪ್ರತಿಕ್ರಿಯೆ ನೀಡುತ್ತೇವೆ.

ಮೈಗವ್ ಗೆ ಸಂಬಂಧಿಸದ ಯಾವುದೇ ನಿರ್ದಿಷ್ಟ ವಿಷಯಕ್ಕೆ ಮತ್ತು ಮೈಗವ್ ಗೆ ಸಂಬಂಧಿಸದ ಯಾವುದೇ ಸಚಿವಾಲಯ/ಇಲಾಖೆ/ಸರ್ಕಾರಿ ಸಂಸ್ಥೆಗೆ ಸಂಬಂಧಿಸಿರುವ ಪ್ರತಿಕ್ರಿಯೆ ಅಥವಾ ಪ್ರಶ್ನೆಯನ್ನು ಹೊಂದಿದ್ದರೆ, ದಯವಿಟ್ಟು ಸಂಬಂಧಪಟ್ಟ ಸಚಿವಾಲಯ/ಇಲಾಖೆ/ಸರ್ಕಾರಿ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ ಅಥವಾ ಆಯಾ ವೆಬ್‌ಸೈಟ್‌ ಗಳಿಗೆ ಭೇಟಿ ನೀಡಿ. ಇಂತಹ ಪ್ರಶ್ನೆಗಳಿಗೆ/ಸಮಸ್ಯೆಗಳಿಗೆ ಮೈಗವ್ ಉತ್ತರಿಸುವುದಿಲ್ಲ.